ಕರ್ನಾಟಕ ಸಂಘದ ಮುಂಬಯಿ ಕಲಾಭಾರತಿ ; ಲಕ್ಷ್ಮಿ ಸುಧೀಂದ್ರ ೬ ನೆಯ ಪುಣ್ಯ ಸ್ಮೃತಿ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಮುಂಬಯಿಯ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿಯ  ಕಲಾವೇದಿಕೆ, ಕಲಾಭಾರತಿ  ಹಾಗೂ ಭವಾನಿ ಮೀರ್ ಮೀರಾ ಪರಿವಾರದ ವತಿಯಿಂದ ಲಕ್ಷ್ಮಿ ಸುಧೀಂದ್ರರವರ  ೬ ನೆಯ ಪುಣ್ಯ ಸ್ಮೃತಿಯ  ಅಂಗವಾಗಿ ವರ್ಷ ೨೦೨೧ರ ಫೆಬ್ರವರಿ ೧೯ ರ ಬೆಳಿಗ್ಯೆ,  ೧೦-೩೦ ರಿಂದ ಮುಂಬಯಿನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್ ನ ಸುಸಜ್ಜಿತ ಸಭಾಗೃಹದಲ್ಲಿ  ಅಂತಾರಾಷ್ಟ್ರೀಯ ಕಿರಾಣಾ ಘರಾಣದ ಸುಪ್ರಸಿದ್ಧ ಗಾಯಕ ಪಂ. ಜಯತೀರ್ಥ ಮೇವುಂಡಿ (ಕನ್ನಡಿಗರು) ಹಾಗೂ ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು.  ಪಕ್ಕವಾದ್ಯದಲ್ಲಿ ತಬಲಾ : ಮಂದಾರ್ ಪುರಾಣಿಕ, ಸಾರಂಗಿ : ಫಾರಿಕ್ ಲತೀಫ್ ಖಾನ್.  ಸಂವಾದಿನಿ : ಜ್ಞಾನೇಶ್ವರ್ ಸೋನಾವಣೆ, ಜಯಂತ್ ನಾಯ್ಡು, ಹಾಗೂ ತಾನ್ಪುರದಲ್ಲಿ ಪ್ರಕಾಶ್ ನಾಯಿಕ್ ಜೊತೆಯಲ್ಲಿದ್ದರು.


ಕಾರ್ಯಕ್ರಮದ ಆಯೋಜಕರಾಗಿದ್ದ ಡಾ ಭವಾನಿಯವರು  ಮೊದಲು ಆಹ್ವಾನಿತರಾಗಿ ಆಗಮಿಸಿದ ಸಂಗೀತಕಾರ ಡಾ. ಮೇವುಂಡಿಯವರ ಅನೇಕ  ಕಲಾಭಿಮಾನಿಗಳನ್ನೂ ಕಲಾಕಾರರನ್ನೂ ಮತ್ತು  ದಿವಂಗತ ಶ್ರೀಮತಿ ಲಕ್ಷ್ಮಿ ಸುಧೀಂದ್ರರವರ ಹಳೆಯ  ವಿದ್ಯಾರ್ಥಿಗಳನ್ನೂ ಸ್ವಾಗತಿಸಿದರು.  ಸಂಗೀತಕಾರ ಡಾ. ಮೇವುಂಡಿಯವರ ಅನೇಕ  ಕಲಾಭಿಮಾನಿಗಳನ್ನು ಕಲಾಕಾರರನ್ನು ವಿಶೇಷ ಅತಿಥಿಗಳಿಂದ ಸತ್ಕರಿಸಿ ವಂದಿಸಿದರು. 

ಡಾ. ಭವಾನಿಯವರು ಕಲಾವಿದ ಪಂ. ಜಯತೀರ್ಥ ಮೇವುಂಡಿಯವರನ್ನು ಮತ್ತು ಸಹ ಕಲಾವಿದರನ್ನೂ ಸಭೆಗೆ ಪರಿಚಯಿಸುತ್ತಿದ್ದಾರೆ. 
                                         ಪ. ಜಯತೀರ್ಥ ಮೇವುಂಡಿಯವರಿಗೆ ಪುಷ್ಪಗುಚ್ಛದಿಂದ ಸನ್ಮಾನ 
        ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಪನ್ನವಾದ ಬಳಿಕ ಕಲಾವಿದರ ಜೊತೆಗೆ ಡಾ. ಭವಾನಿ ಮತ್ತು ಗೆಳೆಯರು. 
 
ಮೇವುಂಡಿಯವರ ಸಂಗೀತ ಕಾರ್ಯಕ್ರಮಕ್ಕೆ  ಭಾಗವಹಿಸಿದ ಪ್ರಮುಖ ವ್ಯಕ್ತಿಗಳು : ಮನೋಹರ ಕೋರಿ (ಕರ್ನಾಟಕ ಸಂಘದ ಅಧ್ಯಕ್ಷ) ಡಾ. ಭರತ್ ಕುಮಾರ್ ಪೊಲಿಪು.  ಮೈಸೂರು ಅಸೋಸಿಯೇಷನ್ ನ ಮತ್ತು ಮುಂಬಯಿ ಕನ್ನಡ ಸಂಘದ ಸದಸ್ಯರು, ಕಾರ್ಯಕರ್ತರು ಹಾಗೂ ಇನ್ನಿತರ ಅಭಿಮಾನಿಗಳು ಹಾಜರಿದ್ದರು.  

ಪಂ. ಜಯತೀರ್ಥ ಮೇವುಂಡಿಯವರು ಹಾಡುಗಾರಿಕೆ ಆರಂಭಿಸಿ, ಒಂದು ಗಂಟೆಗೂ ಹೆಚ್ಚು ಸಮಯದಲ್ಲಿ ಪ್ರಸ್ತುತಪಡಿಸಿದ ಕೃತಿ, 'ಅಬ್ ತೊ ತೇರಿ ಪಿಯಾಕೆ' ಕೋಮಲ್ ಋಷಭ್ ಅಸಾವರಿ ರಾಗದಲ್ಲಿ ಪ್ರಾರಂಭಿಸಿ, ವಿಳಂಬಿತ್ ಏಕ್ ತಾಳದಲ್ಲಿ ಹಾಡನ್ನು ವಿಸ್ತಾರವಾಗಿ ಮುಂದುವರೆಸಿ, ಧೃತ್ ತೀನ್ ತಾಳದಲ್ಲಿ 'ಮೈ ತೋ ತುಮ್ಹರೋ ದಾಸ್' ಬಂದಿಶ್ ನ್ನು ಸೊಗಸಾಗಿ ಪ್ರಸ್ತುತಪಡಿಸಿದರು.  
'ಹಿಂದೋಳ ರಾಗದಲ್ಲಿ ಛೋಟಾ ಖಯಾಲ್' ನ್ನು ಪ್ರಸ್ತುತಪಡಿಸಿ 'ಬೃಂದಾವನಿ ಸಾರಂಗ್' ನಲ್ಲಿ 'ಜಾವೂಮ್ ಮೈ  ತೋಸೆ ಬಲಿಹಾರೀ' ಎಂಬ ಬಂದಿಶ್ ಹಾಡಿ ಸಂಗೀತ ರಸಿಕರ ಮನಸ್ಸನ್ನು ತಣಿಸಿದರು. 'ಬೃಂದಾವನಿ ಸಾರಂಗದ ನಂತರ "ಭಾಗ್ಯದ ಲಕ್ಷ್ಮೀ ಬಾರಮ್ಮ" ಕೃತಿಯನ್ನು ಪಂ. ಮೇವುಂಡಿಯವರು ಪ್ರಸ್ತುತಪಡಿಸಿದಾಗ ಸಭಿಕರ ಕರತಾಡನ ಮುಗಿಲು ಮುಟ್ಟಿತ್ತು. 
 
ಕೊನೆಗೆ, ನಾಮ್ ದೇವ್ ಮಹಾರಾಜರ ಮರಾಠಿ ಅಭಂಗವನ್ನು ಭೈರವಿ ರಾಗದಲ್ಲಿ ಮತ್ತು ಜತೆಗೆ ಮಹಿಪತಿದಾಸರ ಕೃತಿಯೊಂದಿಗೆ ಸಂಗೀತ ಕಚೇರಿಯ ಸಮಾರೋಪವಾಯಿತು.  

ಕೋವಿಡ್ ಹೆಮ್ಮಾರಿಯ ಭಯದಿಂದ ಸಂಗೀತ ಕಾರ್ಯಕ್ರಮಕ್ಕೆ ನಗರದ  ದೂರದ ಪ್ರದೇಶಗಳಿಂದ ಬಹಳ ಜನ ಬರಲಾಗದಿದ್ದರೂ, ಸಂಗೀತಾಸಕ್ತರು ಕಾರ್ಯಕ್ರಮದ ಪೂರ್ತಿ ಹಾಜರಿದ್ದು ಸಂಗೀತದ ಆನಂದವನ್ನು ಪಡೆದರು. 
 

ಉದಯವಾಣಿ ದಿನಪತ್ರಿಕೆ,  ಶ್ರೀಮತಿ ಲಕ್ಷ್ಮಿ ಸುಧೀಂದ್ರರವರ  ೬ ನೆಯ ಪುಣ್ಯ ಸ್ಮೃತಿಯ ಬಗ್ಗೆ ಮೈಸೂರ್ ಅಸೋಸಿಯೇಷನ್ ನಲ್ಲಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮದ ಬಗ್ಗೆ ವರದಿಮಾಡಿದೆ. 

-ಎಚ್. ಆರ್. ಎಲ್ 





Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !