ಮೈಸೂರು ಅಸೋಸಿಯೇಷನ್ ಮುಂಬಯಿ, ಹಾಗೂ ಬಸವರಾಜ ರಾಜಗುರು ಪ್ರತಿಷ್ಠಾನ ಬೆಂಗಳೂರು, ಜೊತೆಯಾಗಿ ಡಾ. ಗಾನಯೋಗಿ ಪುಟ್ಟರಾಜ ಗವಾಯಿಯವರ ಜಯಂತಿಯನ್ನು ಹಮ್ಮಿಕೊಂಡಿದ್ದರು.

https://sway.office.com/DlBAgVClX1NpAiLE?ref=Link

ವರ್ಷ ೨೦೨೦ ರ, ಮಾರ್ಚ್ ೧ ನೇ ತಾರೀಖಿನ ಸಂಜೆಯ ಪ್ರಮುಖ ಗಾಯಕಿಯಾಗಿದ್ದ   ಶ್ರೀಮತಿ ಚಂದನಬಾಲಾ, ರ ಜೊತೆಗೆ  ಶ್ರೀ ವಿನಾಯಕ್ ಅವರು ತಬಲಾದಲ್ಲಿ  ಗಿಟಾರ್ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು ಮತ್ತು , ಹಾರ್ಮೋನಿಯಂ ಮೇಲೆ ಶ್ರೀ ಅಭಯ್ ರಾವಂಡೆಯವರು ಅತ್ಯುತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟರು.
ಕಾರ್ಯಕ್ರಮವನ್ನು ವೀಕ್ಷಿಸಲು ನಗರದ ಹಲವು ಕಡೆಗಳಿಂದ ಬಂದ ಪ್ರಮುಖರಲ್ಲಿ, ವಿದುಷಿ. ಡಾ. ಶ್ಯಾಮಲಾ ಪ್ರಕಾಶ್, ಡಾ. ಭವಾನಿ, ವಿಧುಷಿ ಶ್ಯಾಮಲಾ ರಾಧೇಶ್, ಶ್ರೀಮತಿ ಶ್ರೀ ವಸಂತ್, ಮೊದಲಾದವರಿದ್ದರು. 

ಪಂಡಿತ. ಪುಟ್ಟರಾಜ ಗವಾಯಿ ಅವರ ಸೂಕ್ಷ್ಮ ಪರಿಚಯ : 

ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತಗಳಲ್ಲಿ ಕೃಷಿ ಮಾಡಿದ್ದ ಅವರು ಕನ್ನಡ ,ಹಿಂದಿ, ಸಂಸ್ಕೃತದಲ್ಲಿ ಅಧ್ಯಾತ್ಮವನ್ನು ಕುರಿತು ಕೃತಿರಚನೆ ಮಾಡಿದ್ದಾರೆ. ಒಟ್ಟು ೮೦ ಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ  ಗುರುಗಳಾದ ಪಂಚಾಕ್ಷರಿ ಗವಾಯಿಯವರ ಬಗ್ಗೆ ಅಪಾರ ಗೌರವ ಪ್ರೀತಿ. ತಮ್ಮ ಪ್ರೀತಿಯ ಹಿರಿಮೆಯನ್ನು ಕನ್ನಡ ನಾಡಿನಲ್ಲಿ ತಮ್ಮ ಕೃತಿಗಳ ಮುಖಾಂತರ ಸಾರಿದ್ಧಾರೆ.
ಅವರು ಮುಖ್ಯವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಅವರ ಗೀತೆಗಳನ್ನು ಹಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ,
ಕಾರ್ಯಕ್ರಮದ ಮೊದಲಿನಲ್ಲಿ ವಿದುಷಿ. ಚಂದನ ಬಾಲ ಅವರು, 'ಗುರು ಪಂಚಾಕ್ಷರೇಶ್ವರ' ಎಂಬ ಕೃತಿಯಿಂದ ಆರಂಭಿಸಿ ದಾಸಶ್ರೇಷ್ಠ ಪುರಂದರದಾಸರ ಕೃತಿಗಳನ್ನು ಸಭೆಯ ಮುಂದೆ ಬಹಳ ಹೃದಯಂಗಮವಾಗಿ ಪ್ರಸ್ತುತಿಮಾಡಿದರು.
೧. ಕಾಗದ ಬಂದಿದೆ ನಮಗೆ ಕಮಲಾ ನಾಭನಿಂದ ಕಾಗದ ಬಂದಿದೆ.
೨. ಶಿವಶರಣೆ ಅಕ್ಕ ಮಹಾದೇವಿಯವರ ಶೈಲಿಯ ವಚನವನ್ನು 'ಗೀಗೀ ಶೈಲಿ'ಯಲ್ಲಿ ಹಾಡಿ ಸಭೀಕರನ್ನೂ ತಮ್ಮ ಜೊತೆಯಲ್ಲಿ ಹಾಡಲು ಪ್ರೇರೇಪಿಸಿದ ರೀತಿ ಅನನ್ಯವಾಗಿತ್ತು.
೩, 'ಸಂತೆಯೊಳಗೊಂದು ಮನೆಯ ಮಾಡಿ',ಎನ್ನುವ ಅಕ್ಕನವರ ಕೃತಿ ನಮ್ಮೆಲ್ಲ ಸುಖದುಃಖಗಳಿಗೆ ನಾವೇ ಹೊಣೆಯಲ್ಲವೇ ಅದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡವರೂ ನಾವೇ, ಅದಕ್ಕೆ ಯಾಕೆ ಚಿಂತಿಸಬೇಕು. ಎಲ್ಲಾಸಮಯದಲ್ಲೂ ಮಾನಸಿಕ ಸಮತೋಲನ ಕಳೆದುಕೊಳ್ಳಬಾರದು ಎನ್ನುವ ತತ್ವವನ್ನು ಚೆನ್ನಾಗಿ ಹಾಡಿದರು.
೪ ಪುಟ್ಟರಾಜ ಗವಾಯಿ ಅವರು ರಚಿಸಿದ 'ಗುರು'ವೆಂಬ ಕೃತಿಯನ್ನು ಸಭೆಯಮುಂದೆ ಖವ್ವಾಲಿ ಶೈಲಿಯಲ್ಲಿ ಪ್ರಸ್ತುತಿಪಡಿಸಿದರು.
೫ ಭಕ್ತಿಭಂಡಾರಿ ಬಸವಣ್ಣನವರ ಅಮೋಘ ಕೃತಿ ಕಲ್ಲನಾಗರ ಕಂಡರೆ ಹಾಲನೆರೆಯೆನೆಂಬರು, ರಸಿಕರಿಗೆ ಬಹಳ ಮುದಕೊಟ್ಟಿತು.
೬, ಕಾರ್ಯಕ್ರಮದ ಕೊನೆಯಲ್ಲಿ ಪುರುಂದರದಾಸರ  'ಭಾಗ್ಯದ ಲಕ್ಷ್ಮೀ ಬಾರಮ್ಮ ದೇವರನಾಮ' ತುಂಬಾ ಸುಂದರವಾಗಿ ಮೂಡಿಬಂತು. 

ಹಾಡಿದ ಕೃತಿಗಳಲ್ಲಿ  ಕೆಲವನ್ನು ಕೆಳಗೆ ಕೊಟ್ಟಿದ್ದೇನೆ  :

Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

ಸಾಧಕರೊಂದಿಗೆ ಮುಖಾಮುಖಿ !

The Annual Golden Jubilee Endowment lecture program, organised by the Mysore Association, jointly with the Kannnada division of Mumbai university (2024) !