ಮುಂಬೈ ನಗರದ ಹಲವಾರು ಮಾಹಿತಿ ಸಂಗ್ರಹಗಳು ಈ ತಾಣದಲ್ಲಿವೆ. ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಮತ್ತು ಸಿನೆಮಾ, ಮುಂತಾದ ಹಲವು ಕಲಾ-ಪ್ರಾಕಾರಗಳಿಗೆ ಮುಂಬೈ ತವರುಭೂಮಿ !
ನಾನು ಮುಂಬೈನಲ್ಲಿ ವಾಸವಾಗಿರುವಷ್ಟು ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಿದ ಅಥವಾ ನೋಡಲಾಗದ ಅನೇಕ ಶ್ರೇಷ್ಠ ಕಲಾವಿದರನ್ನು ಇಲ್ಲಿ ನೋಡಿದ್ದೇನೆ ; ಕೇಳಿದ್ದೇನೆ ಸಹಿತ !
’ಹರಿ ಭಕ್ತಿ ಸಾರ ’- ಡಾ. ವಿದ್ಯಾಭೂಷಣ, ಬೆಂಗಳೂರು.
Get link
Facebook
X
Pinterest
Email
Other Apps
-
ಗಾಯನ :
೨೦೧೦ ರ ನವೆಂಬರ್, ೨೭, ಶನಿವಾರದಂದು,
ನಾಟಕಗಳು :
ಬೆಂಗಳೂರಿನ ’ಅನೇಕ ನಾಟಕ ತಂಡ ”ದವರಿಂದ, "ಮಸ್ತಕಾಭಿಷೇಕ ರಿಹರ್ಸಲ್ಲು"
ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ'ವನ್ನು ಶನಿವಾರ, ೨೫, ನವೆಂಬರ್, ೨೦೨೩ ರ ಸಾಯಂಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು ಆ ಸಂದರ್ಭದಲ್ಲಿ ೨೦೨೩ ರಲ್ಲಿ ಜರುಗಿದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಆ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಮುಂಬಯಿಯ ಎಲ್ಲಾ ಜಿಲ್ಲೆಗಳಿಂದ ಸಂಗೀತ ಕಾರ್ಯಕ್ರಮದ ಆನಂದವನ್ನು ಸವಿಯಲು ಸ್ಪರ್ಧಾಳುಗಳ ಪೋಷಕರು ಹಾಗೂ ಮನೆಯವರಲ್ಲದೇ ಕನ್ನಡದ ಸಹೃದಯರೆಲ್ಲಾ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಶ್ರೀ ನಾರಾಯಣ ನವಿಲೇಕರ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು . ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಡಾ. ಬಿ. ಆರ್. ಮಂಜುನಾಥ ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು ಕಾರ್ಯಕ್ರಮ ಪ್ರಸ್ತುತಿಯನ್ನು ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಮಾಡುತ್ತಿರುವುದು ಕಾರ್ಯಕ್ರಮದ ಮೊದಲು ಸಮಿತಿಯ ಸದಸ್ಯರೆಲ್ಲ ದೀಪ ಬೆಳಗಿಸಿ ಶುಭಾರಂಭಮಾಡಿದರು. ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿ ಡಾ . ಗಣಪತಿ ಶಂಕರಲಿಂಗ ದೀಪ ಬೆಳಗಿಸುತ್ತಿರುವುದು ...
ಸಾಧಕರೊಂದಿಗೆ ಮುಖಾಮುಖಿ : ಮುಂಬಯಿನ ಖ್ಯಾತ ವೈದ್ಯರೂ ಸಂಘಟಕರೂ ಆದ ಡಾ. ಸುರೇಶರಾವ್ ರವರನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು, ಒಳ್ಳೆಯ ವಾಗ್ಮಿಗಳೂ ಆದ. ಡಾ. ಜಿ. ಏನ್ ಉಪಾಧ್ಯರವರು ೧೦ ಏಪ್ರಿಲ್, ೨೦೨೪ ರಂದು ಒಂದು ಸಂವಾದವನ್ನು ನಡೆಸಿಕೊಟ್ಟ ಕಾರ್ಯಕ್ರಮವಿದು. ಕಾರ್ಯಕ್ರಮ ಸಂಯೋಜನೆಯನ್ನು ಡಾ. ಪೂರ್ಣಿಮಾ ಶೆಟ್ಟಿಯವರು ಮಾಡಿದ್ದಾರೆ. ಸ್ಥಳ : ರಾನಡೆ ಭವನ, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ವಿಷಯ : 'ಅರೋಗ್ಯ ಮತ್ತು ಶಿಕ್ಷಣ' ತಾರೀಖು : ೧೦, ಏಪ್ರಿಲ್, ೨೦೨೪ ಯೂ ಟ್ಯೂಬ್ ಕೊಂಡಿ : https://youtu.be/NO1xi9z0sNQ?si=CjjW3h6DeAwqjuEW
ಮೈಸೂರು ಅಸೋಸಿಯೇಷನ್ ನ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜತೆ ಜಂಟಿಯಾಗಿ ಆಯೋಜಿಸುತ್ತಿರುವ ವಾರ್ಷಿಕ (೨೦೨೪) ದತ್ತಿ ಉಪನ್ಯಾಸ ಮಾಲಿಕೆಗೆ ಸ್ವಾಗತ. Link : https://youtu.be/SJJ1TsOu63I?si=WeiMA6XQizRtkBjJ
Comments